Story-2 ಬಿಸಿಲು ಬೆಳದಿಂಗಳು (Bisilu Beladingalu)
ಈ ನನ್ನ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ. ಹಾಗೂ ಈ ಕಥೆಯನ್ನು ನನ್ನ ಕಲ್ಪನೆಯಲ್ಲಿ ಮೂಡಿದೆ. ಇದು ಯಾರಿಗೂ ಸಂಬಂಧಿಸಿದ್ದಲ್ಲ. ಹಾಗೇನಾದರೂ ಇದ್ದಾರೆ ಅದು ಕೇವಲ ನಿಮ್ಮ ಭ್ರಮೆ ಅಷ್ಟೇ.
ಅಧ್ಯಾಯ-1 ಕನ್ನಿಯಾಕುಮಾರಿ
ಕನ್ನಿಯಾಕುಮಾರಿ ವಿವಿಧ ರೀತಿಯಲ್ಲಿ ವಿಶೇಷ ತಾಣವಾಗಿದೆ. ಇದು ಭಾರತದ ಮುಖ್ಯ ಭೂಭಾಗದ ದಕ್ಷಿಣದ ತುದಿಯಾಗಿದೆ. ಮೂರು ಪ್ರಮುಖ ಜಲಮೂಲಗಳು - ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ - ಇಲ್ಲಿಯೇ ಕನ್ನಿಯಾಕುಮಾರಿಯಲ್ಲಿ ಸಂಗಮಿಸುತ್ತದೆ. ಇಂತಹ ಭೌಗೋಳಿಕವಾಗಿ ಆಶೀರ್ವದಿಸಿದ ತಾಣವು ಅಪರೂಪವಾಗಿದೆ ಮತ್ತು ಈ ವೈಶಿಷ್ಟ್ಯಗಳು ಕನ್ನಿಯಾಕುಮಾರಿಯನ್ನು ವಾರ್ಷಿಕವಾಗಿ ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ.
ಈ ಸ್ಥಳವು ಹಿಂದೂ ದೇವತೆ ದೇವಿ ಕನ್ನಿಯಾಕುಮಾರಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ, ಇದನ್ನು ಭಗವಾನ್ ಕೃಷ್ಣನ ಸಹೋದರಿ ಎಂದು ಪರಿಗಣಿಸಲಾಗಿದೆ. ಭಾರತ ಸರ್ಕಾರ ಇದನ್ನು ಕನ್ನಿಯಾಕುಮಾರಿ ಎಂದು ನಾಮಕರಣ ಮಾಡಿತು.
ಭಾವೋದ್ರಿಕ್ತ ಪ್ರಯಾಣಿಕನಿಗೆ ಕನ್ನಿಯಾಕುಮಾರಿಯು ಅನೇಕ ಅದ್ಭುತ ಸಂತೋಷಗಳನ್ನು ನೀಡುತ್ತದೆ. ಸಹಜವಾಗಿಯೇ ಕರಾವಳಿ ಪ್ರದೇಶವಾದ ಕನ್ನಿಯಾಕುಮಾರಿಯು ಉತ್ತಮವಾದ ಬೀಚ್‌ಗಳನ್ನು ಹೊಂದಿದ್ದು ಅದು ವಿಹಾರವನ್ನು ಕಳೆಯಲು ಸೂಕ್ತವಾಗಿದೆ. ನಂತರ ಕನ್ನಿಯಾಕುಮಾರಿ ನೀಡುತ್ತಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಿಮಗೆ ನೆನಪಿಸುವ ಅದ್ಭುತ ಸ್ಮಾರಕಗಳಿವೆ. ನಂತರ ವಿವಿಧ ದೇವಾಲಯಗಳು, ಚರ್ಚ್‌ಗಳು, ಜಲಪಾತಗಳು - ಇವೆಲ್ಲವೂ ಕನ್ನಿಯಾಕುಮಾರಿಯನ್ನು ಅನ್ವೇಷಿಸಲೇಬೇಕಾದ ತಾಣವನ್ನಾಗಿ ಮಾಡುವ ಬೆರಗುಗೊಳಿಸುವ ಅನುಭವಗಳನ್ನು ಸೇರಿಸುತ್ತವೆ. ಹುಣ್ಣಿಮೆಯ ದಿನಗಳಲ್ಲಿ ಏಕಕಾಲದಲ್ಲಿ ಸಂಭವಿಸುವ ಸೂರ್ಯಾಸ್ತ ಮತ್ತು ಚಂದ್ರೋದಯದ ಚಮತ್ಕಾರವನ್ನು ನೀವು ವೀಕ್ಷಿಸಬಹುದಾದ ಭಾರತದ ಏಕೈಕ ತಾಣವೆಂದರೆ ಕನ್ನಿಯಾಕುಮಾರಿ. ‘ಚಿತ್ರ ಪೌರ್ಣಮಿ’ಯ ದಿನದಲ್ಲಿ ಸೂರ್ಯ ಮತ್ತು ಚಂದ್ರರು ಒಂದೇ ದಿಗಂತದಲ್ಲಿ ಮುಖಾಮುಖಿಯಾಗಿ ಕಾಣಿಸಿಕೊಳ್ಳುವುದು ಇನ್ನೂ ದೊಡ್ಡದಾಗಿದೆ.
ಈ ಪ್ರದೇಶದ ಎರಡು ಜನಪ್ರಿಯ ಆಕರ್ಷಣೆಗಳೆಂದರೆ ವಿವೇಕಾನಂದ ರಾಕ್ ಸ್ಮಾರಕ ಮತ್ತು ಸಮುದ್ರದ ಪಕ್ಕದಲ್ಲಿರುವ ತಿರುವಳ್ಳುವರ್ ಪ್ರತಿಮೆ.
ನಾನು ಈ ಸ್ಥಳ, ಬೀಚ್, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಇಷ್ಟಪಡುತ್ತೇನೆ. ನಾನು ಬಹಳಷ್ಟು ಸಂತೋಷವನ್ನು ಕಂಡುಕೊಳ್ಳುತ್ತೇನೆ ಮತ್ತು ನಾನು ನನ್ನ ಮನಸು ಶಾಂತವಾಗಿರಿಸಿಕೊಳ್ಳುತ್ತೇನೆ.
ಅಧ್ಯಾಯ-2 ಮೋಡ ಕವಿದ ಆ ಚಂದ್ರ
ಆದರೆ ನಿನ್ನೆಯಿಂದ ಯಾಕೋ ನನ್ನ ಮನಸು ಸರಿಯಾಗಿಲ್ಲ. ನಿನ್ನೆ ಬಂದ ಆ ಫೋನ್ ಕರೆಯಿಂದ, ಆ ಕರೆ ಮಾಡಿದ ಆ ಹುಡುಗಿ ಹೆಸರು ಹೇಳದೆ ಫೋನ್ ಯಾಕೆ ಇಟ್ಲು. ಯಾರವಳು ನನ್ನತ್ರ ಏನು ಕೆಲಸ ಅವಳಿಗೆ.
ಸುಖವಾಗಿದ್ದ ನನ್ನ ಜೀವನದಲ್ಲಿ ಇದೆಂತ ವಿಪರ್ಯಾಸ. ಎಲ್ಲ ತೊರೆದು ಬಂದು ನಾನು ಹೊಸ ಜೀವನ ಕಟ್ಟಿಕೊಂಡಿದ್ದೇನೆ, ಮತ್ತೆ ಹಳೇಯ ನೆನಪುಗಳು ಯಾಕೆ. ಅವಳ್ಯಾಕೆ ನಾನ್ ನೋಡಕ್ ಬರ್ಬೇಕು, ಅದು ಇಷ್ಟು ವರ್ಷಗಳ ನಂತರ. ನನಗೂ ಅವಳಿಗೂ ಏನು ಸಂಬಂದ.
ನಾನು ಯೋಚಿಸುತ್ತಿರುವಾಗ ಇದ್ದಕ್ಕಿದ್ದಂತೆ ಕಾರಿನ ಹಾರ್ನ್ ಕೇಳಿಸಿತು, ನನ್ನ ಮಗ ನನಗೆ ಕರೆ ಮಾಡಿ ನಾನು ನಿನ್ನನ್ನು ಆಫೀಸಿಗೆ ಡ್ರಾಪ್ ಮಾಡುತ್ತೇನೆ ಎಂದು ಹೇಳಿದನು. ನಾನು ನನ್ನ ಮುಖದಲ್ಲಿ ಯಾವುದೇ ದುಃಖವನ್ನು ವ್ಯಕ್ತಪಡಿಸಲಿಲ್ಲ, ನಾನು ಮುಗುಳ್ನಕ್ಕು ಇಂದು ಕಾಲೇಜಿಗೆ ತಡವಾಗಿಲ್ಲ ಎಂದು ಕೇಳಿದೆ. ಇಲ್ಲ ಅಮ್ಮಾ, ಇವತ್ತು ಕ್ಲಾಸ್ 9:00 ರಿಂದ ಶುರು. ಅಮ್ಮಾ, ನೀನು ಈ ಬೀಚ್ ಸೈಡ್ ಏರಿಯಾಗೆ ದಿನಾಲೂ ಯಾಕೆ ಬರುತ್ತೀಯ, ಅದೇ ಬಿಸಿಲು, ಅದೇ ನೀರು, ಅದರಲ್ಲಿ ಯಾವ ಬದಲಾವಣೆಯೂ ಇಲ್ಲ,ಆದ್ರೂ ನೀವು ದಿನನಿತ್ಯ ಏನು ನೋಡ್ತೀರಿ ನಾವು ಪ್ರವಾಸಿಗರಲ್ಲ. ಕಾರು ವೇಗವಾಗಿ ಮುಂದೆ ಸಾಗಿತು, ಅಲೆಗಳು ದಡ್ಡಕೆ ಮುತ್ತಿಕುತಿದ್ವು.
ನಿನ್ನ ಗೆಳತಿ ಹೇಗಿದ್ದಾಳೆ? ಅವಳು ಚೆನ್ನಾಗಿದ್ದಾಳೆ. ನಿನ್ನೆ ಅವಳು ನನ್ನ ಮೇಲೆ ಕೋಪಗೊಂಡಿದ್ದಳು ಏಕೆಂದರೆ ನಾನು ನಂದುವನ್ನು ನೋಡಲು ಬೇಗನೆ ಮನೆಗೆ ಬಂದೆ. ನೀನು ಅವರನ್ನು ನಂದು ಎಂದು ಕರೆಯಲು ಎಷ್ಟು ಧೈರ್ಯ?, ಅವರು ನಿಮ್ಮ ತಂದೆ, ನಂದ ಕಿಶೋರ್, ಅವರನ್ನು ಪಪ್ಪ ಅಥವಾ ಡ್ಯಾಡಿ ಎಂದು ಕರಿಯಬೇಕು. ಸರಿ ಅಮ್ಮಾ, ನಾನು ನಿನ್ನ ಮುಂದೆ ಹೇಳಿದ್ದೆ, ಅಪ್ಪನ ಬಳಿ ಅಲ್ಲ, ಆದರೆ ಈ ಜಗತ್ತಿನಲ್ಲಿ ಯಾರೂ ಅವರನ್ನು ಅಗೌರವಿಸುವುದು ನನಗೆ ಇಷ್ಟವಿಲ್ಲ, ಅದಕ್ಕಾಗಿ ನಾನು ಯಾವುದೇ ಹಂತಕ್ಕೆ ಬೇಕಾದ್ರು ಹೋಗಬಹುದು.
ನನಗೆ ಗೊತ್ತು, ನೀವಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಪ್ರೀತಿಸ್ತೀರಾ ಅಂತ. ಆದ್ರೆ ಅಮ್ಮ, ಪಪ್ಪಾ ಯಾಕೆ ನಿನ್ನ ಅನುಪಮ್ಮ ಅಂತ ಕರೀತಾರೆ , ಅನು ಅಂತ ಯಾಕೆ ಕರಿಯಲ್ಲ, ಶಾರ್ಟ್ ಅಂಡ್ ಸ್ವೀಟ್ ಹಾಗಿ. ಅವರು ನನ್ನ ತುಂಬಾ ಪ್ರೀತಿಸ್ತಾರೆ ಹಾಗು ಗೌರವಿಸುತಾರೆ , ಅದಕೆ ಪೂರ್ತಿ ಹೆಸರಿಂದ ಕರೀತಾರೆ.
ಮಮ್ಮಿ ನಿಮ್ಮ ಬ್ಯಾಂಕ್ ಬಂತು, ಓಕೆ ಥ್ಯಾಂಕ್ಸ್ ಮಗನೆ, ಬೈ ಅಮ್ಮ, ಏ,ಅವಳಿಗೆ ಸಾರೀ ಹೇಳು. ಓಕೆ ಅಮ್ಮ. ಬೈ ಆದಿತ್ಯ. ಬೈ ಅಮ್ಮ, ಸಂಜೆ ನಾನೇ ಬಂದು ಪಿಕ್ ಮಾಡ್ತೀನಿ. ಓಕೆ ಹುಷಾರು ಕಣೋ.
ಅವಳು ಕಛೇರಿಯನ್ನು ಪ್ರವೇಶಿಸಿದ ತಕ್ಷಣ ಎಲ್ಲಾ ಸಿಬ್ಬಂದಿ ಎದ್ದು ಅವಳಿಗೆ ಗುಡ್ ಮಾರ್ನಿಂಗ್ ಮೇಡಂ ಎಂದರು, ಅವಳು ಕೂಡ ಎಲ್ಲರಿಗು ವಿಶ್ ಮಾಡಿ ತನ್ನ ಕ್ಯಾಬಿನ್‌ಗೆ ಹೋದಳು. ಮಧ್ಯಾಹ್ನ ಆಕೆಗೆ ಒಂದು ಕರೆ ಬಂತು, ಸ್ವಲ್ಪ ಹೊತಿನ ನಂತರ ಅವಳು ಇದ್ದಕ್ಕಿದ್ದಂತೆ ಕುಳಿತ ಕುರ್ಚಿಯಿಂದ ಕೆಳಗೆ ಬಿದ್ದಳು, ಆಕೆಯನ್ನು ಮಹಿಳಾ ಸಿಬ್ಬಂದಿ ಮೇಲೆತ್ತಿದರು ಮತ್ತು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅವಳು ದಯವಿಟ್ಟು ನನ್ನ ಗಂಡನಿಗೆ ಕರೆ ಮಾಡಿ ಎಂದು ಹೇಳುತಿದಳು. ಮೇಡಂ , ನಿಮ್ಮ ಯಜಮಾನರಿಗೆ ವಿಷ್ಯ ತೆಳಿಸಿದರೆ.
ನಂದಕಿಶೋರ್ ಐಸಿಯುಗೆ ಧಾವಿಸಿದರು, ಡಾಕ್ಟರ್ ಬಿಪಿ ಚೆಕ್ ಮಾಡುತ್ತಿದ್ದರು ಮತ್ತು ಚಿಕಿತ್ಸೆ ನೀಡಲು ಪ್ರಾರಂಭಿಸಿದರು, ವೈದ್ಯರು ಒತ್ತಡದ ಕಾರಣ ದಿಂದ ಹಾಗಿದೆ, ಅವರು ಒಂದು ಗಂಟೆಯಲ್ಲಿ ಸರಿಯಾಗುತ್ತಾರೇ , ನಂತರ ನಾವು ವಾರ್ಡ್‌ಗೆ ಶಿಫ್ಟ್ ಮಾಡುತ್ತೇವೆ, ಅವರು ಇಲ್ಲಿಯೇ ಇರಲಿ ಎಂದರು, ಓಕೆ ಡಾಕ್ಟರ್ ಎಂದು ಹೇಳಿ, ಮಗ ಆದಿತ್ಯನಿಗೆ ಫೋನ್ ಮಾಡಿ ಹಾಸ್ಪಿಟಲ್ಗೆ ಬಾ ಎಂದರು ನಂದಕಿಶೋರ್.
ಅವಳನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು, ವೈದ್ಯರು ನಂದ ಕಿಶೋರ್ ಅವರನ್ನು ಕರೆದರು, ಚಿಂತಿಸಬೇಕಾಗಿಲ್ಲ, ಆದರೆ ಅವಳನ್ನು ಹೆಚ್ಚು ಮಾತನಾಡುವಂತೆ ಮಾಡಬೇಡಿ, ಅವಳು ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಲಿ ಎಂದರು.
ನನಗೆ ಎರಡು ದಿನಗಳಿಂದ ಬೆಂಗಳೂರಿನಿಂದ ಒಂದು ಹುಡುಗಿಯಿಂದ ಫೋನ್ ಕರೆಗಳು ಬರುತ್ತಿದ್ದವು, ಇಂದು ಆ ಹುಡುಗಿ ಕನ್ಯಾಕುಮಾರಿಗೆ ಬಂದಿದ್ದಾಳೆ, ಅವಳು ನನ್ನನ್ನು ಭೇಟಿಯಾಗಬೇಕೆಂದು ಹೇಳಿದಳು. ನಂದ ಕಿಶೋರ್ ಗೆ ಸಣ್ಣಗೆ ಹಣೆಯ ಮೇಲೆ ಬೆವರು ಬಂತು, ಅನುಪಮ್ಮ, ರೀ, ಯಾಕೆ, ಏನಾಯಿತು , ಏನು ಇಲ್ಲ ಎಂದ ನಂದ ಕಿಶೋರ್. ಅವಳು ತಾಜ್ ವೆಸ್ಟೆಂಡ್ ನಲ್ಲಿ ಸೂಟ್ 301ನಲಿ ಇದ್ದಾಳೆ, ನಾನು ಹೋಗಿ ನೋಡಬೇಕು, ಬೇಡ ಎಂದ ನಂದ ಕಿಶೋರ್, ನಾನೇ ಹೋಗಿ ಕರ್ಕೊಂಡು ಬರ್ತೀನಿ ಎಂದು ಹೇಳಿ, ಹೊರಗಡೆ ಇದ್ದ ಮಗನಿಗೆ ಒಳ ಕರೆದು, ಅಮ್ಮನ ಹತ್ತಿರ ಇರು ನಾನು ಬರ್ತೀನಿ ಎಂದು ಹೇಳಿ ಹೋರಾಟ.
ಕಾರು ವೇಗವಾಗಿ ಚಲಿಸುತ್ತಿತ್ತು, ಆ ಹುಡುಗಿ ಯಾರು, ನನ್ನ ಹೆಂಡತಿಯಿಂದ ಅವಳಿಗೆ ಏನು ಬೇಕು ಎಂದು ಯೋಚಿಸುತ್ತಿದ್ದ. ಹೋಟೆಲ್ ತಲುಪಿದ ನಂತರ, ಅವರು ಸೂಟ್ ರೂಮ್ ಕೇಳಿದ ಮತ್ತು ಅವನು ರಿಸೆಪ್ಶನ್ ಬಳಿ ವಿಚಾರಿಸಿದನು, ಸ್ವಲ್ಪ ಸಮಯದ ನಂತರ ಅವರನ್ನು ಸೂಟ್ ಕೋಣೆಗೆ ಕರೆಯಲಾಯಿತು. ರೂಮ್ನ ಒಳಗೆ ಹೋದಾಗ , ಅವಳು ನಂದ ಕಿಶೋರ್ನ ನೋಡಿ ನಮಸ್ಕಾರ ಹೇಳಿದಳು, ಅವನು ಸ್ವಲ್ಪ ಸಮಾಧಾನವಾಗಿ ಪ್ರತಿ ನಮಸ್ಕಾರ ಮಾಡಿದನು. ಸೋಫಾ ಮೇಲೆ ಕೊಳೀತುಕೊಳ್ಲು ಹೇಳಿದಳು. ಕೋಳಿತ ನಂತರ ನಂದ ಕಿಶೋರ್ ಯಾರು ನೀವು ಎಂದ?. ಅನುಪಮ್ಮ ಬರುತ್ತಾರೆ ಎಂದು ನಾನು ಭಾವಿಸಿದ್ದೆ, ನೀವು ಹೇಗೆ ಬಂದಿದ್ದೀರಿ? ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದ. ಅವಳು ಯಾವಾಗ ?. ನಿಮ್ಮ ಫೋನ್ ಕರೆ ಬಂದ ನಂತರ, ಅವಳು ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಳು. ಅಷ್ಟು ಭಯ ಯಾಕೆ? ಯಾರು ನೀನು?.
ನನ್ನ ಹೆಸರು ಲಾವಣ್ಯ. ಡಾ.ಲಾವಣ್ಯ. ನಾನು ಬಾಲ್ಕಿ ಮತ್ತು ಅನುಶ್ರೀ ಅವರ ಮಗಳು. ನಿನಗೆ ಬಾಲ್ಕಿ ಗೊತ್ತಾ? ಅವರ ಸಂಪೂರ್ಣ ಹೆಸರು ಬಲರಾಮ್ ಕೃಷ್ಣ ಮೂರ್ತಿ ಅಂತ. ಅವರು ಒಬ್ಬ ರೈತ.
ಅಧ್ಯಾಯ-3 ನಮ್ಮ ಊರು.....
ಅಧ್ಯಾಯ-4 ಕೃಷ್ಣ ರುಕ್ಮಿಣಿ
ಕಾಲೇಜು ಪ್ರಾರಂಭವಾಯಿತು, ಅನುಪಮಾ ಹೋಗಲು ಪ್ರಾರಂಭಿಸಿದಳು, ಪ್ರತಿದಿನ ಬಾಲ್ಕಿ ಅವಳನ್ನು ತನ್ನ ಹಳ್ಳಿಯಿಂದ ಹೆದ್ದಾರಿ ಬಸ್ ನಿಲ್ದಾಣಕ್ಕೆ ಬಿಡುತ್ತಿದ್ದನು ಮತ್ತು ಅವನು ಅವಳನ್ನು ಹೆದ್ದಾರಿ ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತಿದ್ದನು.
ಒಂದು ದಿನ ಅನುಶ್ರೀ ಬಾಲ್ಕಿಗೆ ಕರೆ ಮಾಡಿ ಅಕ್ಕ ಅಳುತಿದಾಳೆ, ಬೇಗ ಮನೆಗೆ ಬನ್ನಿ. ಅವನು ಹೊಲದಲ್ಲಿ ಕೆಲಸ ಮಾಡುತ್ತಿದ್ದನು, ಅವನು ತಕ್ಷಣ ಮನೆಗೆ ಬಂದ, ಅವಳು ಕೋಣೆಯಲ್ಲಿ ಅಳುತ್ತಿರುವುದನ್ನು ನೋಡಿದನು, ಬಾಲ್ಕಿ ಏನಾಯಿತು ಎಂದು ಕೇಳಿದಳು, ನನಗೇ ತುಂಬ ಸುಸ್ತಾಗುತ್ತೆ, ಮೈ ಕೈ ಯಲ್ಲ ನೋವು ಯೆಂದಳು, ಅದಕೆ ಅವನು ನಗುತಾ, ತುಂಬ ಕಷ್ಟ ಆಗ್ತಾ ಕಾಲೇಜಿಗೆ ಹೋಗಿಬರೋದಕ್ಕೆ ಎಂದ. ಸರಿ, ನಾಳೆಯಿಂದ ನೀನು ಕಾಲೇಜಿಗೆ ಹೋಗು, ನಾನು ಮನೆ ನೋಡಿಕೊಳ್ಳುತ್ತೇನೆ, ಚೆನ್ನಾಗಿ ಓದು, ಹೆಚ್ಚು ಒತ್ತಡ ತೆಗೆದುಕೊಳ್ಳಬೇಡ ಎಂದ. ಅದ್ರೂ ನಿಮಗೆ ಕಷ್ಟ ಆಗಲ್ವಾ ಎಂದಳು,ನನ್ನ ಬಗ್ಗೆ ಚಿಂತಿಸಬೇಡಿ, ನೀವು ಯಾವಾಗಲೂ ಸಂತೋಷವಾಗಿರಬೇಕು, ಅದು ನನ್ನ ಮೊದಲ ಆದ್ಯತೆಯಾಗಿದೆ ಎಂದ. ಅವಳು ಅವನನ್ನು ಬಿಗಿಯಾಗಿ ತಬ್ಬಿಕೊಂಡಳು , ಸ್ವಲ್ಪ ಸಮಯ ನನ್ನೊಂದಿಗೆ ಮಲಗು ನಾನು ಸುಧಾರಿಸಿಕೊಂಡು ನಂಥರಾ, ನಾನೂ ಅಡುಗೆ ಮಾಡ್ತೀನಿ ಎಂದಳು,ಸರಿ ಎಂದನು,ಅವಳು ಅವನ ಬಲಗೈ ಮೇಲೆ ತಲೆ ಇಟ್ಟುಕೊಂಡು ಮಲಗಿದಳು.
ದಿನಗಳು ಕಳೆಯುತ್ತಿದ್ದವು, ಬಾಲ್ಕಿ ಹೊಲದಲಿ ಬ್ಯುಸಿ ಯಾಗಿದನು.ಬಾಲ್ಕಿ ಮನೆಗೆ ತಡವಾಗಿ ಬರುತ್ತಿದ್ದರಿಂದ ಅನುಪಮ್ಮಗೆ ಕೆಲವೊಮ್ಮೆ ಬೇಸರವಾಗುತ್ತಿತ್ತು, ಅವಳು ಅವನನ್ನು ತುಂಬಾ ಮಿಸ್ ಮಡಿ ಕೊಳ್ಳುತ್ತಿದ್ದಳು.ಕೃಷ್ಣನಿಗಾಗಿ ಕಾಯುತ್ತಿದ್ದ ರುಕ್ಮಿಣಿ ಎಂತದಾಳು, ಅನುಶ್ರೀಗೆ ಪಾಠ ಹೇಳಿಕೊಡುತ್ತಿದ್ದಳು. ಹೀಗೆ ದಿನಗಳು ಕಳೆದವು.
ಬಾಲ್ಕಿ ಮಾವನಿಗೆ ಹೇಳಿದನು, ನಾವು ಬೋರ್‌ವೆಲ್‌ಗೆ ಬ್ಯಾಂಕ್‌ನಿಂದ ಸಾಲ ಪಡೆಯಬೇಕು.ನೀವು ಬ್ಯಾಂಕ್ ಜನರೊಂದಿಗೆ ಮಾತನಾಡಿದ್ದೀರಾ? ಮಾವ ಕೇಳಿದರು.ನಾನು ಬ್ಯಾಂಕ್‌ಗೆ ಹೋಗಿ ಮಾತನಾಡಬೇಕು, ನಾನು ಸ್ವಲ್ಪ ಟೈಮ್ ಬೇಕು, ನಾನೂ ಬ್ಯುಸಿಯಗಿದ್ದೇನೆ ಎಂದು ಬಾಲ್ಕಿ ಹೇಳಿದನು. ಸರಿ, ವಿಚಾರಿಸಿ ನೋಡಿ ಎಂದರು. ಇಬ್ಬರೂ ತಡರಾತ್ರಿ ಮಾತನಾಡುತ್ತಿದ್ದರು. ಕೆಲವು ಬಾರಿ ಅನುಪಮ ಬಂದು ಇಬ್ಬರನ್ನೂ ಬೈಯುತ್ತಿದ್ದಳು, ಈಗಾಗಲೇ ತಡವಾಗಿದೇ ಹೋಗಿ ಮಲಗಿ.
ಅನುಪಮಾ ಪ್ರತಿದಿನ ರಾತ್ರಿ ಕೋಣೆಯಲ್ಲಿ ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಅವಳಿಗೆ ತುಂಬ ಬೇಜಾರ್ ಹಗತಿತ್ತು. ಅವಳು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಳು.
ಕೃಷ್ಣನಿಗಾಗಿ ಕಾಯುತ್ತಿದ್ದ ರುಕ್ಮಿಣಿ ಎಂತದಾಳು!!!!!!.
ಅಧ್ಯಾಯ-5 ಬಯಲುದಾರಿ
ಅನುಪಮ ಕಾಲೇಜು ಹೋಗಿ ಬರ್ತಾ ಇದ್ಲು. ಒಂದೊಂದ್ಸಲ ತುಂಬಾ ಸುಸ್ತಾಗಿದೆ ಅಂತ ಹೇಳ್ತಾ ಇದ್ಲು ಅವಾಗ ಭಾಲ್ಕಿ ಅವಳು ಬೆನ್ನು , ಕೈಕಾಲನ್ನು ಒತ್ತುತ್ತಿದ್ದನು. ಅವಳಿಗೆ ಯಾವುದೇ ದೈಹಿಕ ಹಿಂಸೆ ಕೊಡದೆ ಅವಳನ್ನು ಅವಳ ಪಾಡಿಗೆ ಬಿಟ್ಟಿದನು.
T-20 ಕ್ರಿಕೆಟ್ ಪಂದ್ಯ ಪ್ರಾರಂಭವಾಯಿತು, ಪಂದ್ಯ ಮುಗಿಯುವವರೆಗೂ ಎಲ್ಲರೂ ಟಿವಿ ನೋಡುತ್ತಿದ್ದಳುರು, ಕೆಲವು ಬಾರಿ ಅನುಶ್ರೀ ನೋಡುತ್ತಾ ಮಲಗುತ್ತಿದ್ದಳು, ಬಾಲ್ಕಿ ಅವಳನ್ನು ರೂಮ್ನ ಹಾಸಿಗೆಯ ಮೇಲೆ ಮಲಗಿಸುತ್ತಿದ್ದನು. ಗಂಡ ಹೆಂಡತಿ ಇಬ್ಬರೂ ಕೊನೆಯವರೆಗೂ ಪಂದ್ಯವನ್ನು ನೋಡುತ್ತಿದ್ದರು, ಅನುಪಮ್ಮ ಗಂಡ ನನ್ನನ್ನು ತಬ್ಬಿಕೊಂಡು ಪಂದ್ಯವನ್ನು ನೋಡುತ್ತಾ ತುಂಟ ಜೋಕ್ ಹೇಳುತಿದಳು, ಬಾಲ್ಕಿ ಅದಕೆ ಸ್ಪಂದಿಸುತಿದನು. ಕೆಲವೊಮ್ಮೆ ಪಂದ್ಯವನ್ನು ನೋಡುವಾಗ ಅವರು ಸೋಫಾದಲ್ಲಿ ರೋಮ್ಯಾನ್ಸ್ ಶೊರುಮಾಡುತಿದರು . ಅನುಪಮ್ಮ ತುಂಬಾ ಎಂಜಾಯ್ ಮಾಡುತ್ತಿದ್ದಳು. ಭಾಲ್ಕಿಯ ಒರಟಾದ ಕೈ, ಅವನ ಬಹು ಬಂಧನದಲ್ಲಿ ಬಂದಿಯಾಗಿ ಖುಶಿಯಿಂದ ಉನ್ಮಾದದಲಿ ತೇಲುತಿದ್ದಳು. ಅವಳ ಮುಖದ ಮೇಲೆ ಬಿದ್ದ ಮುಂಗುರುಳನು ಸರಿಸಿ ಅವಳ ಹಣೆಗೆ ಚುಂಬಿಸಿದನು.
ಜೀವನ ತುಂಬಾ ಚನ್ನಾಗಿ ಸಾಗುತಿತು ದೇವರ ದಯೆಯಿಂದ. ಅನುಪಮ್ಮ ತನ್ನ M.Com ಕೋರ್ಸ್ ಮುಗಿಸಿದಳು, ಅವಳು 82% ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದಳು, ಬಾಲ್ಕಿ, ಅಪ್ಪಯ್ಯ ಮತ್ತು ಅನುಶ್ರೀ ಎಲ್ಲರೂ ಸಂತೋಷಪಟ್ಟರು. ಬಾಲ್ಕಿ ತುಂಬಾ ಸಂತೋಷ ಪಟ್ಟನು. ಎಲ್ಲರೂ ತಿರುಪತಿಗೆ ಹೋಗಿ ಬರೋಣ ಎಂದು ಬಾಲ್ಕಿ ಹೇಳಿದನು. ಅಪ್ಪಯ್ಯ, ನೀವು ಹೋಗಿ ಬನ್ನಿ, ತೊಟ್ಟ ಹತ್ರ ಯಾರಾದ್ರೂ ಇರ್ಬೇಕು ಇಲ್ಲಹಂದ್ರೆ ಮಾವಿನ ಕಾಯಿ ಕದಿಯುತ್ತಾರೆ. ಬಾಲ್ಕಿ ಮೂಡಿ ಕೊಡ್ತೀಯಾ ಎಂದ ಅನುಶ್ರೀ ಕೇಳಿದಳು, ಅದಕೆ ಬಾಲ್ಕಿ ಖಂಡಿತವಾಗಿ ನನ್ನ ಹೆಂಡ್ತಿ ಡಿಸ್ಟಿಂಕ್ಷನ್‌ನಲ್ಲಿ ಪಸ್ಸಾಗಿದಾಳೆ. ಯಾವಾಗ ಹೋಗುದು ಅಪ್ಪಿ ಎಂದಳು ಅನುಪಮ್ಮ. ಮುಂದಿನ ಸೋಮವಾರ ಎಂದನು. ಅನುಶ್ರೀ ಓಕೆ ಓಕೆ ಎಂದಳು. ಅನುಪಮ್ಮ, ಅನುಶ್ರೀ ನ ನೋಡುತ ಬಾ ಇವತ್ತು ಇಬ್ರು ಬಟ್ಟೆನೆಲ್ಲ ಹೋಗಿಯೋಣ ಎಂದು ಇಬ್ಬರು ಹಿತ್ತಲಿನ ಕಡೆಗೆ ಹೊರಟರು.
ಅಧ್ಯಾಯ-6 ಗೋವಿಂದಾಯ ನಮೋ ನಮಃ
ನಾವು ಮುಂದಿನ ಸೋಮವಾರ ತಿರುಪತಿ ಹೋಗ್ತಾ ಇದೀವಿ, ಎಲ್ಲರೂ ಬಟ್ಟೆಗಳನ್ನು ಕ್ಲೀನಾಗಿ ಜೋಡಿಸಿಕೊಳ್ಳಿ ಎಂದನು ಬಾಲ್ಕಿ. ಅದಕ್ಕೆ ಅನುಶ್ರೀ, ನಾವ್ ಹೆಂಗ್ ಹೋಗ್ತಿವಿ ಕಾರಲ್ಲ ಬಸ್ಸಲ್ಲ ಟ್ರೈನ್ ಅಲ್ಲ, ಕಾರಲ್ಲು ಹೋಗೋಕೆ ಅಷ್ಟೊಂದು ದುಡ್ಡ್ ಎಲ್ಲಿದೆ, ಸುಮ್ನೆ ಎಲ್ರು ಬಸಲ್ ಹೋಗೋಣ ಎಂದಳು ಅನುಪಮ.
ಅಧ್ಯಾಯ-7 ದೇವ ಲೋಕ ಪ್ರೇಮ ಲೋಕ...
ಇಂಟರ್ವ್ಯೂ ಗೆ ಬಂದಿದ್ದ ಅನುಪಮ, ಸಂಜೆ ಮನೆಗೆ ಹೊರಡುವಾಗ ಆಫರ್ ಲೆಟರ್ನೊಂದಿಗೆ ಹೊರಟಳು. ದಾರಿ ಉದ್ದಕ್ಕೂ ಹೊಸ ಕನಸು ಹೊಸ ಆಸೆ ಹೊಸ ಜೀವನ ಹೊಸ ಹೊಸ ಖುಷಿಯಲ್ಲಿದ್ದಳು.
ಭಾಲ್ಕಿ ಬಸ್ ಸ್ಟ್ಯಾಂಡ್ ಅಲ್ಲಿ ಕಾಯ್ತಾ ಇದ್ದ, ಇವಳ ನಗುಮುಖವನ್ನು ನೋಡಿದ ಭಾಲ್ಕಿ ಸಕ್ಸಸ್ ಅಂದ, ಅದಕ್ಕೆ ಅನುಪಮಾ ಹೌದು ಎಂದಳು. ದಾರಿ ಉದ್ದಕ್ಕೂ ಅನುಪಮಾ ಗಂಡನನ್ನು ತಬ್ಬಿಕೊಂಡು ಬೈಕಿನಲ್ಲಿ ಕೂತಿದಳು. ಬಾಲ್ಕಿಯ ಎದೆ ಸವರುತ. ಮನೆ ತಲುಪಿದಳು. ಎಲ್ಲರ ಮುಖದಲ್ಲಿ ಖುಷಿ ಆನಂದ ಸಂತೋಷ ಇತ್ತು. ಅನುಪಮಾ ಅಪ್ಪಯ್ಯನ ಮುಂದೆ ಇಂಟರ್ವ್ಯೂ ಪ್ರೋಸೆಸ್ ಬಗ್ಗೆ ದೀರ್ಘವಾಗಿ ಮಾತನಾಡುತ್ತಿದ್ದಳು,. ಅಂದು ರಾತ್ರಿ ಅನುಪಮ ಮತ್ತು ಬಾಲ್ಕಿಯ ಮಿಲನೋತ್ಸವ ಜೋರಾಗಿತ್ತು, ನಂತರ ಇಬ್ಬರು ತಮ್ಮ ಹೊಸ ಜೀವನದ ಬಗ್ಗೆ ಕನಸುಗಳ ಬಗ್ಗೆ ಮಾತನಾಡುತ್ತಿದ್ದರು, ಆಗ ಅನುಪಮಾ ಇನ್ನೂ ಒಂದೆರಡು ವರ್ಷ ಮಗು ಬೇಡ ಅನ್ಸುತ್ತೆ ಅಪ್ಪಿ ಎಂದಳು, ನಿನ್ನಿಷ್ಟ ಎಂದನು. ಇನ್ಮೇಲಾದ್ರೂ ಆದರೂ ಗುಡ್ಡೆ ಬಿಸ್ಕೆಟ್ ತಿನ್ನೋದನ್ನ ಕಮ್ಮಿ ಮಾಡು ಎಂದನು, ಅದಕ್ಕೆ ಅನುಪಮ, ನನಗೆ ತುಂಬಾ ಇಷ್ಟ ಅಪ್ಪಿ ಅಂದಳು, ಅದಕ್ಕವನು ಅಯ್ಯೋ ನನ್ ಗುಡ್ಡೆ ಬಿಸ್ಕೆಟ್ ಎಂದನು. ಮತ್ತೊಂದು ಸುತ್ತಿನ ಮಿಲನೋತ್ಸವದ ನಂತರ ಇಬ್ಬರು ಗಾಡ್ ನಿದ್ರೆಗೆ ಜಾರಿದರು.
ಮುಂಜಾನೆ ತೋಟಕ್ಕೆ ಹೋಗಿದ್ದ ಬಾಲ್ಕಿ ಮಧ್ಯಾಹ್ನ ಅಷ್ಟೊತ್ತಿಗೆ ಬಂದನು, ಅನುಪಮಗಳನ್ನು ಕರೆದು ಸಿಟಿಗೆ ಹೋಗ್ತಾಯಿದ್ದೀನಿ ಬಾ ಎಂದನು, ಸರಿ ಎಂದು ಹೋರಾಟ ನಿಂತಳು ಅನುಪಮಾ. ಬೈಕು ವೇಗವಾಗಿ ಹಳ್ಳಿ ರೋಡ್ ಇಂದ ಟಾರ್ ರಸ್ತೆಗೆ ಚಲಿಸುತ್ತಿತ್ತು. ಗಂಡನ ತಬ್ಬಿಕೊಂಡ ಅನುಪಮಾ ನಿದ್ದೆಗೆ ಜಾರಿದಳು, ಬಾಲ್ಕಿ ಅವಾಗವಾಗ ಎಚ್ಚರಿಸುತ್ತ ಮಾತನಾಡಿಸುತಿದನು, ಬಾಲ್ಕಿ ತೋಟಕ್ಕೆ ಬೇಕಾದ ಔಷಧಿಗಳನ್ನು ಜೋಪಾನವಾಗಿ ಒಂದು ಚೀಲದಲ್ಲಿ ಹಾಕಿದನು, ಅನುಪಮಾ ನೋಡ್ತಾ ಇದನ್ನು ಮುಟ್ಟಬೇಡ ಮಾರಾಯ್ತಿ ಎಂದನು, ಚೀಲವನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಇಟ್ಟು ಬೈಕ್ ಓಡಿಸುತ್ತಾ ಪೆಟ್ರೋಲ್ ಬಂಕಿಗೆ ಬಂದನು, ಐನೂರು ರೂಪಾಯಿಗೆ ಪೆಟ್ರೋಲ್ ಹಾಕ್ಸಿದ ನಂತರ, ದುಡ್ಡಿಗಾಗಿ ಪರ್ಸಿನಲ್ಲಿ ಜೇಬಿನಲ್ಲಿ ತಡಕಾಡಿದನು, ಆದರೆ ಎಲ್ಲೂ ಸಿಗಲಿಲ್ಲ, ಅನುಪಮಳನ್ನು ಕೇಳಲು ಸಂಕೋಚ ಪಟ್ಟು, ತನ್ನ ಪರ್ಸಿನ ಮೂಲೆಯಲಿ ಇದ್ದ ಐನೂರುಪಾಯಿಯನ್ನು ತೆಗೆದು ಇದು ತುಂಬಾ ಅದೃಷ್ಟವಂತ ದುಡ್ಡು ಇವತ್ತು ಇದು ಖರ್ಚಾಗೋಯ್ತು ಎಂದನು, ಬಂಕಿನಲ್ಲಿ ಪೆಟ್ರೋಲ್ ಹಾಕುತ್ತಿದ್ದ ಹುಡುಗಿ ನೋಡಿ ನಕ್ಕಳು.
ಬೈಕತ್ತಿ ಮುಂದೆ ಸಾಗಿದರು, ಆಗ ಅನುಪಮಾ ನನ್ನನ್ನ ಕೇಳಬಹುದಿತ್ತು ನನ್ನತ್ರ ಇತ್ತು ದುಡ್ಡು ಎಂದಳು, ಪರ್ವಾಗಿಲ್ಲ ನಿನಗೇನು ಏನಕ್ಕಾದ್ರೂ ಬೇಕಾಗುತ್ತೆ ಇಟ್ಕೊಂಡಿರು ಎಂದನು. ಬೈಕು ಜೋರಾಗಿ ಮುಂದೆ ಸಾಗುತ್ತಿತ್ತು, ಬಾಲ್ಕೀ ಹಾಡು ಹೇಳುತ್ತಾ ಬೈಕನ್ನು ವೇಗ ಹೆಚ್ಚಿಸಿದನು. ಅನುಪಮಾ ಅವನನ್ನು ಗಟ್ಟಿಯಾಗಿ ತಬ್ಬಿಕೋತಿದಳು. ಏನ್ ರಾಯುರು, ತುಂಬಾ ಜೋರಾಗ್ ಹಾಡಿಲ್ಲ ಹೇಳ್ತಾ ಇದ್ದೀರಾ, ನಾಳೆ ನನಗೆ ಆಫೀಸಿದೆ, ಮೊದಲನೇ ದಿನ ನೆನಪಿರಲಿ, ಸುಮ್ನೆ ಮಲಗಿದ್ರೆ ಸರಿ ರಾತ್ರಿ, ಇಲ್ಲಾಂದ್ರೆ ನಾನೇ ಬಂದು ಹಾಲಲ್ಲಿರೋ ಸೋಫಾ ಮೇಲೆ ಮಲ್ಕೊಳ್ತೀನಿ ಎಂದಳು, ಅದಕ್ಕೆ ಅವನು ಇಲ್ಲ ಮಾರಾಯ್ತಿ ನೀನು ಆರಾಮಾಗಿ ಮಲಗು, ನಾನೇ ಸೋಫಾ ಮೇಲ್ ಮಲಗ್ತೀನಿ ಎಂದನು. ಇಬ್ಬರು ತಮ್ಮ ಪ್ರೇಮ ಸಲಾಪಗಳನ್ನು ಮಾತನಾಡುತ್ತಾ ಮನೆ ತಲುಪಿದರು. ಊಟವಾದ ನಂತರ ಸ್ವಲ್ಪ ಹೊತ್ತು ಎಲ್ಲರೂ ಮಾತನಾಡುತ್ತಿದ್ದರು, ಆಗ ಅನುಶ್ರೀ ಅಕ್ಕ ನನಗೆ ಏನು ಕೊಡುಸ್ತೀಯ ನೀನು ಮೊದಲು ಸಂಬಳದಲ್ಲಿ ಅಂದಳು, ಅದಕ್ಕೆ ಅನುಪಮ ನಿನಗೇನು ಬೇಕು ಹೇಳು ನಾನು ಕೊಡುಸ್ತೀನಿ ಅಂದಳು. ಅದಕ್ಕೆ ಬಾಲ್ಕಿ, ನೀನು ಗುಡ್ಡೆ ಬಿಸ್ಕೆಟ್ ಅವಳು ಪಾರ್ಲೆ-ಜಿ ಬಿಸ್ಕೆಟ್ ಎಂದನು. ಅದಕೆ ಅನುಶ್ರಿ ಓಹ್ ಎಂದಳು.ಸ್ವಲ್ಪ ಹೊತ್ತಿನ ನಂತರ ಅಪ್ಪಯ್ಯ, ಮಲಗವ ನಿನ್ ಬೇಗ ನಾಳೆ ಆಫೀಸಿಗೆ ಹೋಗಬೇಕು ಎಂದರು. ಎಲ್ಲರೂ ತಮ್ಮ ರೂಮ್ ಸೇರಿದರು, ಆಗ ಅನುಪಮಾ, ಏನ್ ರಾಯರು ಹಾಲಲ್ಲಿ ಮಲಗಲ್ವಾ, ಅದಕ್ಕೆ ಭಾಲ್ಕಿ ಇಲ್ಲ ಇಲ್ಲೇ ಸೈಲೆಂಟಾಗಿ ಮಲಗ್ತೀನಿ ಅಂದನು. ಅನುಪಮ ನಗುತ್ತ ಸರಿ ನೋಡೋಣ ಎಷ್ಟು ಸೈಲೆಂಟ್ ಆಗಿರ್ತೀರ ಅಂತ. ಇಬ್ಬರು ಮಲಗಿದರು, ಆದರೆ ಇಬ್ಬರಿಗೂ ನಿದ್ದೆ ಹತ್ತಲಿಲ್ಲ, ಆಗ ಅನುಪಮಾ, ಅಪ್ಪಿ ಎಂದಳು ಅಷ್ಟೇ, ಭಾಲ್ಕಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗಿದರು.
ಮರುದಿನ ಬೆಳ್ಳೆಗೆ ಎದ್ದು, ರೆಡಿಯಾಗಿ ದೇವರಿಗೆ ಕೈ ಮುಗಿದು, ಅನುಶ್ರೀಗೆ ಬೈ ಹೇಳಿ ಗಂಡನೊಂದಿಗೆ ಬೈಕ್ ಹತ್ತಿ ಬಸ್ ಸ್ಟೋಪಿನ ಕಡೆಗೆ ಹೊರಟರು, ದಾರಿಮಧ್ಯೆ ಬೈಕ್ ನಿಲ್ಲಿಸಿ ಅನುಪಮಾ ತನ್ನ ಗಂಡನ ತಬ್ಬಿ , ಅಪ್ಪಿ ಎಂದಳು, ಅದಕೆ ಭಾಲ್ಕಿ ಏನು ಎಂದನು, ಆಗ ಅನುಪಮಾ, ನಾನು ನಿನಗೆ ತುಂಬ ಕಷ್ಟ ಕೋಟಿದೀನಿ ಅಲ್ಲವ ಎಂದಳು , ಅದಕೆ ಭಾಲ್ಕಿ, ನೀನು ನನ್ನ ಮುದ್ದಿನ ಹೆಂಡತಿ, ಗಂಡ ಹೆಂಡ್ತಿ ಸಂಬಂಧ ಅಂದ್ರೆ, ಒಬ್ಬರಿಗೆ ಒಬ್ಬರಿಗೆ ಪ್ರೀತಿ ಇಂದ ಆಸರೆಯಾಗಿ ಇರೋದು, ಇದ್ದರ್ಲೆ ಕಷ್ಟದ ಮಾತು ಯಾಕೆ ಬರುತ್ತೆ ಎಂದು ಅವಳನ್ನು ಸಮಾಧಾನ ಮಾಡಿ ಬಸ್ಟಾಪ್ ಕಡೆ ಹೊರಟ್ನು.
ಬಸ್ ಹತ್ತಿದ ಅನುಪಮ್ಮಾ ಕಿಟಕಿಯಿಂದ ಗಂಡನ ಕಡೆ ನೋಡಿ ಮುಗುಳು ನಗುತ್ತ ಬೈ ಮಾಡಿದಳು, ಇಬ್ಬರ ಕಣ್ಣನಚಲಿ ಹನಿ ಇತ್ತು.
ಬಸ್ ವೇಗವಾಗಿ ಮುಂದೇ ಸಾಗುತ್ತಿತ್ತು, ಅನುಪಮಾ ಗಂಡನ ಬಗ್ಗೆ ಯೋಚನೆ ಮಾಡುತಿದ್ದಳು, ನನ್ನ ಅಪ್ಪಿ, ಚಿಕ್ಕ ವಯಸ್ಸಿಗೆ ಅಪ್ಪ ಅಮ್ಮ ಕಳ್ಕೊಂಡ, ಅವನ ದೊಡ್ಡಪ್ಪ ಮನೆಯಲಿ ತುಂಬಾ ಕಷ್ಟ ಪಟ್ಟು ಡಿಪ್ಲೊಮಾ ವರೆಗೂ ಓದಿದ, ಕೆಲಸ ಅಂತ ಏನಿಲ್ಲ, ಆದ್ರೆ ಒಂದು ಹೆಣ್ಣಿಗೆ ಕೊಡಬೇಕಾದ ಪ್ರೀತಿ, ಗೌರವ , ಸಂಬಂಧದ ಗೌರವ ಎಲ್ಲಾ ಇದೇ ನನ್ನ ಅಪ್ಪಿಗೆ. ನನ್ನಗೆ ಏನು ಕಷ್ಟ ಹಾಗಬರೆದೆಂದು ತುಂಬ ಪ್ರೀತಿಯಿಂದ ನೋಡಿಕೊಳ್ತಾನೆ ನನ್ನ ಅಪ್ಪಿ. ಅಪ್ಪನಿಗೆ ಅವನ ಕಂಡ್ರೆ ತುಂಬಾ ಇಷ್ಟ, ಹಾಗೂ ತುಂಬಾ ಗೌರವ, ನನ್ ಏನಾದ್ರೂ ಸ್ವಲ್ಪ ಜೋರಾಗಿ ಮಾತನಾಡಿದರೆ ಅಪ್ಪಿ ಅತ್ರ ಅಪ್ಪಯ್ಯ ನಂಗೆ ಬ್ಯೇತಾರೆ. ಅನುಶ್ರೀಗಂತು ಭಾಲ್ಕಿ ಇಲ್ಲಾಂದ್ರೆ, ಭಾಲ್ಕಿ ಬಂದ್ಮೇಲೇನೆ ನಾನು ಊಟ ಮಾಡೋದು ಅಂತ ಅಟ್ಟ ಮಾಡ್ತಾಳೆ. ಅದು ನನ್ ಅಪ್ಪಿ ಅಂದ್ರೆ. ದೇವರೇ ನಾನು ನನ್ನ ಅಪ್ಪಿನ ಚನ್ನಾಗಿ ನೋಡಕಬೇಕು, ನನ್ನ ಮದುವೆಯಾಗಿ ನಮ್ಮ ಮನೆಗೆ ಬಂದಾಗ ಅಪ್ಪಿ ಅಪ್ಪಯ್ಯನ ಹತ್ರ, ನಂಗೆಗೊತ್ತಿರ್ಲಿಲ್ಲ ಇಂಥ ಒಂದು ಒಳ್ಳೇ ಮನೆಗೆ ನಾನು ಆಳಿಯನಾಗಿ ಹೋಗ್ತೀನಿ ಅಂತ ಎಂದು ಹೇಳಿದ, ಹಾಗ ಅಪ್ಪಯ್ಯ ಇನ್ಮುಂದೆ ಈ ಮನೆ ಜವಾಬ್ದಾರಿ ನಿಂದೆ ಕಣ್ಣಪ್ಪ ಎಂದ್ರು. ನಮ್ಮ ನೆಂಟರು ಎಲ್ಲ ಯಾರನು ತಂದು ಮಾದುವೆ ಮಾಡಿದರೆ ಎಂದ್ರು, ಹಾಗ ಅಪ್ಪಯ್ಯ ಅವನು ಈ ಮನೆ ಯಜಮಾನ ನನ್ನ ಆಳಿಯ ಎಂದು ಜೋರಾಗಿ ಗದರಿದರು, ಅವತಿನಿಂದ ಎಲ್ಲರೂ ಸುಮಾನದ್ರು. ಭಾಲ್ಕಿ ನನ್ನ ಮುದ್ದಿನ ಗಂಡ, ಅಲ್ಲ ನನ್ನ ಪ್ರೀತಿಯ ಅಪ್ಪಿ. ತನ್ನ ಪರ್ಸ್ನಲ್ಲಿ ಇದ್ದ ಅವನ್ ಫೋಟೋ ನೋಡಿ ನಕ್ಕಳು ಒಮ್ಮೆ. ಆಗ ಬಸ್ ಸ್ಪೀಕರ್ ನಿಂದಾ ಒಂದು ಹಾಡು ಬರ್ತಿತು, ಅದನು ಕೇಳೀ ಅವಳ ಮನದಲ್ಲಿ ಏನು ಒಂಥರಾ ಖುಷಿ ಆಯಿತು.
ದೇವ ಲೋಕ ಪ್ರೇಮ ಲೋಕ ನನ್ನ ಮನೆಯಿಗೆ, ಇಲ್ಲಿ ನಾನು, ನನ್ನ ಗಂಡ, ನನ್ನ ಮಗುವೇ, ಪ್ರತಿ ರಾತ್ರಿ, ಪ್ರತಿ ಹಗಲು ಬರೀ ನಗುವೇ........
ಅಧ್ಯಾಯ-8 ಮೊದಲ ಹೆಜ್ಜೆ
ಕಛೇರಿಯಲ್ಲಿ ಮೊದಲ ದಿನ ಅನುಪಮ್ಮ HR ಕ್ಯಾಬಿನ್‌ಗೆ ಹೋಗಿ ಅವರನು ಭೇಟಿ ಮಾಡಿದರು, HR, ಇಂದು ನಿಮ್ಮಗೆ ಓರಿಯಂಟೇಶನ್ ಪ್ರೋಗ್ರಾಂ ಇರುತ್ತೆ, ನಾಳೆಯಿಂದ ನಿಮ್ಮ ತರಬೇತಿ ಪ್ರಾರಂಭವಾಗುತ್ತದೆ ಎಂದರು. ಅಂದು 5 ಸದಸ್ಯರು ಹೊಸದಾಗಿ ಸೇರಿದರು, 2 ಮಹಿಳಾ ಅಭ್ಯರ್ಥಿಗಳು ಮತ್ತು ಮೂರು ಪುರುಷ ಅಭ್ಯರ್ಥಿಗಳು . HR ಅವರು ನೀತಿ, ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಹೇಳಿದರು, ರಜೆ ನೀತಿ, ಪ್ರೋಟೋಕಾಲ್ ಅನ್ನು ಅನುಸರಿಸಬೇಕು ಎಂದರು . ಊಟದ ವಿರಾಮದಲ್ಲಿ ಗೊತಾಯಿತು, ನಾಳೆಯಿಂದ ಟ್ರೇನಿಂಗ್ ಅನ್ನು ಜಮದಗ್ನಿ ಕೊಡ್ತಾರೆ ಅಂತ, ಅವರೆಗೆ ಮೂಗಿನ ತುದಿಯಲ್ಲೇ ಇರುತ್ತೆ ಕೊಪ್ಪ ಎಂದು ಮಾತನಾಡಿಕೊಳುತಿದರು. ಅವನ ಹೆಸರು ಕಲ್ಯಾಣ್, ಆಫೀಸಿನಲ್ಲಿ ಜನ ಅವನನ್ನು ಹಾಗೆ ಕರೆಯುತ್ತಾರೆ. ಅನೇಕ ಜನರು ಅವನನ್ನು ಇಷ್ಟಪಡುವುದಿಲ್ಲ, ಆದರೆ ಅವನು ಉತಮ ಕೆಲಸಗಾರ ಮತ್ತು ತನ್ನ ಕೆಲಸಕ್ಕೆ ನಿಷ್ಠನಾಗಿರುತ್ತಾನೆ, ಎಂದು ಮಾತಾಡಿಕೊಳುತಿದರು. ಇದರ ಪರಿವೇ ಇಲ್ಲದೆ ಫೋನ್ ಎತ್ತಿಕೊಂಡು ಗಂಡನಿಗೆ ಕಾಲ್ ಮಾಡಿ ಮಾತನಾಡುತಿದಳು.ಗಂಡನೊಂದಿಗೆ ಮಾತನಾಡುವಾಗ, ಬಾಲ್ಕಿ ಅವನು ಮೂರು ದಿನಗಳ ಕಾಲ ಕೃಷಿ ತರಬೇತಿಗಾಗಿ ಚಿಕ್ಕಮಗಳೂರಿಗೆ ಹೋಗಬೇಕಾಗಿದೆ ಮತ್ತು ಇಂದು ಮಧ್ಯಾಹ್ನ 2:00 ಗಂಟೆಗೆ ಹೋಗುವುದಾಗಿ ಹೇಳಿದನು. ಇದ್ದಕ್ಕಿದ್ದ ಹಾಗೆ ಅಂದರೆ ಹೇಗೆ ಅಂದಳು ಅನುಪಮಾ, ಅವನು ಕಳೆದ ವಾರ ಹೇಳಿದರು, ನಾನು ನಿಮಗೆ ಹೇಳಲು ಮರೆತಿದ್ದೇನೆ ಎಂದ. ಸರಿ ಹೋಗಿ ಸುರಕ್ಷಿತವಾಗಿ ಬಾ ಅಂದಳು.
ಊಟದ ನಂತರ, ಕಲ್ಯಾಣ ಅವರ ತರಬೇತಿ ಅವಧಿ ಆರಂಭವಾದ ನಂತರ ಬ್ಯಾಂಕಿಂಗ್ ಸಾಫ್ಟ್‌ವೇರ್, ಅದರಲ್ಲಿ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡುತ್ತಿದ್ದರು. ಮೊದಲ ದಿನವಾದ್ದರಿಂದ ಎಲ್ಲರೂ ಸಮಯಚಿತದಿಂದ ಎಲ್ಲರೂ ಕೇಳುತ್ತಿದ್ದರು, ನಂತರ ಅಧಿವೇಶನದ ಕೊನೆಯಲ್ಲಿ ಅವರು ಎಲ್ಲರ ಬಗ್ಗೆ ಪರಿಚಯ ಮಾಡಿಕೊಳ್ಳುತ್ತಿದ್ದರು, ಒಳ್ಳೆಯ ಮತ್ತು ಜಾಲಿ ವ್ಯಕ್ತಿ, ಬ್ಯಾಂಕಿಂಗ್ ಸಾಫ್ಟ್‌ವೇರ್ ಬಗ್ಗೆ ಯಾವುದೇ ಅನುಮಾನಗಳಿದ್ದರೂ ನಾಳೆ ಕೇಳಿ ಮಾತನಾಡುತ್ತೇನೆ ಎಂದು ಹೇಳಿದರು, ಇಂದು ಮೊದಲ ದಿನ ಎಲ್ಲರನ್ನೂ ನೋಡಿ ಆನಂದಿಸಿ. ಕಚೇರಿಯ ಗಾಸಿಪ್‌ಗಳನ್ನು ಆನಂದಿಸಿ ಎಂದರು. ಅವರು ಬೇಗ ಹೊರಟರು, ನಂತರ ಎಚ್‌ಆರ್ ಬಂದು ನಾಳೆಯಿಂದ ನಿಮ್ಮ ಕೆಲಸ ಪ್ರಾರಂಭವಾಗಲಿದೆ, ಕಲ್ಯಾಣ್ ನಿಮ್ಮೆಲ್ಲರನ್ನೂ ಗ್ರಾಹಕರ ಸಂಬಂಧ ಮತ್ತು ದಾಖಲೆಗಳ ಬಗ್ಗೆ ಮತ್ತೊಮ್ಮೆ ತಿಳಿಸುತ್ತಾರೆ ಎಂದು ಹೇಳಿದರು. ಕಲ್ಯಾಣ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು, ಕೆಲವು ಸೀನಿಯರ್ ಹೇಳುವ ರೀತಿಗು ತುಂಬಾ ವಿಭಿನ್ನವಾಗಿತ್ತು, ಅವರು ವಿನಮ್ರ ಮತ್ತು ಒಳ್ಳೆಯ ವ್ಯಕ್ತಿಯಾಗಿದ್ದರು.
ಇದ್ದಕ್ಕಿದ್ದಂತೆ ಫೈಲ್ ಸೆಕ್ಷನ್ವಿ ಭಾಗದ ಅಂಬಿಕಾ ನಮ್ಮ ತರಬೇತಿ ಕೋಣೆಗೆ ಬಂದಳು, ಓಹ್ ಓಹ್ ಯು ಾರೆ ಸರ್ಚಿನ್ಗ್ನೀ ನಂದ ಕಿಶೋರ್ ಅಂದರು, ಅದಕೆ ಅಂಬಿಕಾ, ಮೇಡಂ ಎಂದು ರಾಗವಾಗಿ ನಕ್ಕು ಹೋದಳು. ನಂತರ ತಿಳಿದ್ದು ಬಂದದ್ದು, ಅವರಿಬ್ಬರೂ, ತುಂಬಾ ಸಲುಗೆಯಿಂದ ಇರುತಾರೆ, ಆದರೆ ಆಫೀಸಿನಲ್ಲಿ ದೂರ ದೂರ ಎಂದು. ಆಫೀಸಿನ ಹೊರಗಡೆ, ಬೈಕಿನಲ್ಲಿ ಸುತಾಡುತಾರೆ, ವೀಕೆಂಡ್ಸ್ನಲ್ಲಿ ಒಟ್ಟಿಗೆ ಪಿಕ್ಚರ್ಗೆ ಹೋಗುತ್ತಾರೆ ಎಂದು. ಅವರು ಬೆಳಿಗ್ಗೆಯಿಂದ ಸಂಜೆಯವರೆಗೆ ತಿರುಗಾಡುತ್ತಾರೆ, ಆದರೆ ಅವನು ಅವಳೊಂದಿಗೆ ವಿಪರೀತವಾಗಿದ್ದಾಗ ಅವಳು ದೂರವಿರುತ್ತಾಳೆ, ಆದರೆ ಅವರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ ಮತ್ತು ಚುಂಬಿಸುತ್ತಾರೆ, ಅದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಸಂಜೆ, ಆಫೀಸ್ ಮುಗಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಅನುಪಮಾ ಈ ಜಗತ್ತಿನಲ್ಲಿ ಅವರಿಬ್ಬರೂ ಯಾವ ರೀತಿಯ ಜನರು ಎಂದು ಯೋಚಿಸುತ್ತಿದ್ದಳು. ಮದುವೆಯಾಗಿಲ್ಲ, ಮದುವೆಯಾಗಲಿದ್ದೀರಾ ಅಥವಾ ಇಲ್ಲವೇ ಎಂಬುದು ಅವರಿಗೆ ತಿಳಿದಿಲ್ಲ, ಆದರು ಅವರ ನಡುವೆ ಏನು ತಬ್ಬಿಕೊಳ್ಳುವುದು ಮತ್ತು ಚುಂಬಿಸುವುದು, ಏನು ಕೊಳಕು ಜನ ಇವರು ಎಂದುಕೊಂಡಳು. ಅವಳು ತನ್ನ ಗಂಡನಿಗೆ ಹೇಳಬೇಕೆಂದು ಯೋಚಿಸಿದಳು, ಆದರೆ ನಂತರ ಅವನು ನನ್ನನ್ನು ಕೆಲಸಕ್ಕೆ ಹೋಗದಂತೆ ತಡೆಯಬಹುದು ಎಂದು ಸುಮ್ಮನಾದಳು.
ಬಸ್ ಅವಳ ಹಳ್ಳಿ ನಿಲ್ದಾಣವನ್ನು ತಲುಪಿತು, ಅವಳ ತಂದೆ ಮತ್ತು ಸಹೋದರಿ ಅವಳಿಗಾಗಿ ಕಾಯುತ್ತಿದ್ದರು, ಮೂವರೂ ಒಟ್ಟಿಗೆ ಅವರ ಮನೆಗೆ ನಡೆದರು ಮತ್ತು ಅನುಶ್ರೀ ನಿಮ್ಮ ಮೊದಲ ದಿನ ಹೇಗಿದೆ ಎಂದು ಕೇಳಿದರು, ಸರಿ, ಸರಿ ಆದರೆ ನಾನು ಕಂಪ್ಯೂಟರ್ ಕಲಿಯಬೇಕಾಗಿದೆ. ಕಲ್ಯಾಣ್‌ನಿಂದ ಕಲಿಯಬೇಕು ಎಂದು ಕೊಂಡಳು.
ಮನೆಗೆ ತಲುಪಿದ ನಂತರ ಸ್ವಲ್ಪ ಸಮಯದ ನಂತರ ಅನುಶ್ರೀ ಅಡುಗೆ ಮಾಡಲು ಹೋದಳು, ಇದನ್ನು ನೋಡಿದ ಅನುಪಮಾ ನೀನು ಯಾಕೆ ಇದೆಲ್ಲ ಮಾಡುತ್ತಿದೀಯಾ, ನಾನು ಮಾಡುತ್ತೇನೆ ಎಂದಳು, ನಂತರ ಇಬ್ಬರೂ ಒಟ್ಟಿಗೆ ಅಡುಗೆ ಮಾಡಲು ಪ್ರಾರಂಭಿಸಿದರು, ಅಡುಗೆ ಮಾಡುವಾಗ, ಅನುಪಮಾ ಅನು ನೀನು ಚೆನ್ನಾಗಿ ಓದಬೇಕು, ಇಂದು ನಾನು ಆಫೀಸಿನಲ್ಲಿ ಕೆಲವು ಜನರನ್ನು ನೋಡಿದೆ, ಅವರು ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ, ಅವರ ನಡವಳಿಕೆಯು ಅತ್ಯುತ್ತಮವಾಗಿದೆ, ಏಕೆಂದರೆ ನಾವು ಹಳ್ಳಿಗಳಿಂದ ಬಂದಿದ್ದೇವೆ, ಪರಿಸ್ಥಿತಿಗೆ ತಕ್ಷಣ ಪ್ರತಿಕ್ರಿಯಿಸುವುದು ನಮಗೆ ತಿಳಿದಿಲ್ಲ, ಆದ್ದರಿಂದ ನಾವು ಉತ್ತಮ ಶಿಕ್ಷಣವನ್ನು ಹೊಂದಿರಬೇಕು ಮತ್ತು ನಮ್ಮ ಶಾಲೆ ಮತ್ತು ಕಾಲೇಜುನಲ್ಲಿ ಧೈರ್ಯದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಯಿಸಬೇಕು ಮತ್ತು ಕ್ರಿಯಾತ್ಮಕವಾಗಿರಬೇಕು ಎಂದಳು. ಕೆಲವು ಮೂರ್ಖರು ಅಂಬಿಕಾ ಮತ್ತು ನಂದ ಕಿಶೋರ್ ಅವರಂತೆಯೇ ಕಚೇರಿಯಲ್ಲಿದ್ದಾರೆ, ಆದರೆ ಕಲ್ಯಾಣ್ ಅವರಂತಹ ಕೆಲವು ಒಳ್ಳೆಯ ಜನರು, ತುಂಬಾ ವಿನಮ್ರ ಮತ್ತು ಸಜ್ಜನರು ಸಹ ಇದ್ದಾರೆ. ಊಟ ಮಾಡುವಾಗ ಅನುಶ್ರೀ, ಬಾಲ್ಕಿ ಫೋನ್ ಮಾಡಲಿಲ್ಲ, ಬಹುಶಃ ಅವನು ಪ್ರಯಾಣ ಮಾಡುತ್ತಿದ್ದಾನೆ ಎಂದು ಅಪ್ಪ ಹೇಳಿದರು. ಓಹ್, ನಾನು ಬಾಲ್ಕಿಗೆ ಕರೆ ಮಾಡಲು ಮರೆತಿದ್ದೇನೆ, ನಾನು ಈ ಈಡಿಯಟ್ಸ್ ಆಫೀಸ್ ಕಥೆಗಳು ಯೋಚಿಸುತ್ತಾ, ಅವಳು ಫೋನ್ ತೆಗೆದುಕೊಂಡು ತನ್ನ ಗಂಡನಿಗೆ ಡೈಲ್ ಮಾಡಿದಳು, ನೀವು ಸುರಕ್ಷಿತವಾಗಿ ತಲುಪಿದ್ದೀರಾ, ರಾತ್ರಿ ಊಟ ಮಾಡಿದ್ದೀರಾ, ಅವನು ಈಗಷ್ಟೇ ಗೆಸ್ಟ್ ಹೌಸ್ ತಲುಪಿದೆನೆ, ಇಲ್ಲಿಯೇ ಇರುತ್ತೇನೆ ಎಂದು ಹೇಳಿದನು. ಇಲ್ಲಿ ತುಂಬಾ ಚಳಿ, ಅದ್ರ್ ನೀನು ಇಲ್ಲ, ತುಂಬಾ ಮಿಸ್ ಮಾಡ್ಕೊಂಡೇ ನಿನ್ನ ಎಂದ. ಅನುಪಮಾ,ಬೇಗ ಬಾ ಅಪ್ಪಿ ಎಂದಳು ಅನುಪಮಿ ಸ್ವಲ್ಪಹೊತ್ತು ಅಪ್ಪನ ಬಳಿ ಮಾತನಾಡಿ ಮಲಗಲು ತನ್ನ ಕೋಣೆಗೆ ಹೋದಳು. ಎಸ್ಟುತದ್ರು ನಿದ್ದೆ ಬರಲಿಲ್ಲ,
ಗಂಡ ಮತ್ತು ಹೆಂಡತಿಯ ಸಂಬಂಧವನ್ನು ಭೂಮಿಯ ಮೇಲಿನ ಸುಂದರ ಸಂಬಂಧವೆಂದು ಪರಿಗಣಿಸಲಾಗುತ್ತದೆ. ನಾನು ಮದುವೆಯಾಗಿದ್ದೇನೆ. ಈ ಸಮಯದಲ್ಲಿ ನಾನು ಅನೇಕ ವಿಷಯಗಳನ್ನು ಅರ್ಥಮಾಡಿಕೊಂಡಿದ್ದೇನೆ, ಅನುಭವಿಸಿದ್ದೇನೆ. ಗಂಡ-ಹೆಂಡತಿ ಎಂದರೆ ಒಟ್ಟಿಗೆ ಇರುವವರು, ಒಟ್ಟಿಗೆ ಕುಟುಂಬವನ್ನು ನಡೆಸುವವರು ಮತ್ತು ಯಾವಾಗಲೂ ಪರಸ್ಪರ ನೋವು ಮತ್ತು ಸಂತೋಷದಲ್ಲಿ ಇರುತ್ತಾರೆ. ದೇವರು ಒಬ್ಬರಿಗೊಬ್ಬರು ಪುರುಷ ಮತ್ತು ಸ್ತ್ರೀಯರನ್ನು ಒಡನಾಡಿಯಾಗಿ ಮಾಡಿದನೇ. ಆದರೆ ಕೆಲವರು ಬೇವರ್ಸಿಗಳು ಅದೇನೆಲ್ಲ ಮರೆತು ನಾಯಿ ಥರ ಜೀವೆನ ಮಾಡತಾರೆ ಎಂದುಕೊಂಡು, ಬಾರದ ನಿದ್ದೆಗೆ ಬಲವಂತದಿಂದ ಕಣ್ಣು ಮುಚ್ಚಿ ಮಲಗಿದಳು.
ಪತಿ-ಪತ್ನಿಯರ ಬಾಂಧವ್ಯವನ್ನು ಬೇರೆ ಯಾವುದೇ ಬಾಂಧವ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ಪ್ರೀತಿ, ನಗು ಮತ್ತು ಜೀವಮಾನದ ಆನಂದದಿಂದ, ಈ ಸುಂದರ ಸಂಬಂಧವು ಕೊಡಿರುತದ್ದೇ ಇರುತ್ತದೆ.
ಅಧ್ಯಾಯ-9 ಮೊದಲ ಭೇಟಿ
ಅಧ್ಯಾಯ- ದೇವರ ಅಟ್ಟ
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-8 ಒಡೆದ ಹಾಲು
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-9 ಸೂತ್ರದ ಕೈ ಗೊಂಬೆ
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-10 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-11 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-12 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-13 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-14 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-15 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-16 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-17 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ
ಅಧ್ಯಾಯ-18 XXXXXX
ನನ್ನ ಮಗಳ ಹೆಸರು ಆದ್ಯ, ತುಂಬಾ ಮುದ್ದಾ